ಕರಾಡ ರಜತೋತ್ಸವ
ನವೆಂಬರ್ ೨೪-೨೫ನೇ ಶನಿವಾರ ಹಾಗೂ ಭಾನುವಾರ
೨೪ನೇ ಶನಿವಾರ
-
ಗಣಹೋಮ
-
ತ್ರಿಕಾಲ ದುರ್ಗಾ ಪೂಜೆ
-
ಬೆಳಗಿನ ಪೂಜೆ
-
೨೨ನೇ ಕರಾಡ ವಾಣಿ ವಿಶೇಷಾಂಕ ಬಿಡುಗಡೆ
-
ಪದ್ಮಶ್ರೀ ಗೌರಿಶಂಕರ್ ಅವರಿಗೆ ಗೌರವಾರ್ಪಣೆ
-
ಮದ್ಯಾಹ್ನದ ಮಹಾಪೂಜೆ
-
ಕರಾಡ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
-
ಭಜನೆ, ಲಲಿತಾ ಸಹಸ್ರನಾಮ ಪಠನೆ
-
ಮಹಾಪೂಜೆ , ಪ್ರಸಾದ ವಿತರಣೆ
೨೫ನೇ ಭಾನುವಾರ
-
ಸತ್ಯನಾರಾಯಣ ಪೂಜೆ
-
ಸಭಾ ಕಾರ್ಯಕ್ರಮ
-
ಮುಖ್ಯ ಅತಿಥಿ - ಅಶೋಕ್ ಹಾರ್ನಹಳ್ಳಿ
-
ಸನ್ಮಾನ
-
ಗಿರಿಧರ ಪರಾಡ್ಕರ್
-
ಪ್ರದೀಪ್ ಆಟಿಕುಕ್ಕೆ
-
ಕೃಷ್ಣರಾಜ ಶರ್ಮ ಕೊಲ್ಲೆಂಕಾನ
-
ರಜತೋತ್ಸವ ಸ್ಮರಣ ಸಂಚಿಕೆ ಬಿಡುಗಡೆ
-
ಪ್ರತಿಭಾ ಪುರಸ್ಕಾರ
ರಜತ ಸಂಭ್ರಮ ಆರಂಭೋತ್ಸವ
ಶತ ರುದ್ರಾಭಿಷೇಕ ದೊಂದಿಗೆ
ರಜತ ಸಂಭ್ರಮ ವರ್ಷವನ್ನು ಇದೇ ಬರುವ 22 ಜನವರಿ ೨೦೨೩ ತಿಂಗಳಲ್ಲಿ ಶತ ರುದ್ರಾಭಿಷೇಕ ದೊಂದಿಗೆ ಆರಂ ಭಿಸುವುದಾಗಿ ನಮ್ಮ ಸಮಾಜದ ಆಚಾರ್ಯರುಗಳ ಮಾರ್ಗದರ್ಶನದೊಂದಿಗೆ ನಿರ್ಧರಿಸಲಾಗಿದೆ.
ಕರಾಡ ಕ್ರೀಡೋತ್ಸವ ೨೦೨೩
Please Mark your calendar and Prepare yourself for Karada Premier League on 26-Feb-2023
02-Aug-2022
ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜದ ವತಿಯಿಂದ ನಡೆಯುವ ಋಗುಪಾಕರ್ಮವು ಅಗೋಸ್ತು(August) 2ನೇ ತಾರೀಕಿನಂದು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪ್ರಾಂಗಣದಲ್ಲಿ ನಡೆಯಲಿದೆ.ಪ್ರಾತ ಕಾಲ 6:30ಕ್ಕೆ ಆರಂಭವಾಗಿ 9:30ಕ್ಕೆ ಮುಗಿಯಲಿದೆ. ಎಂದಿನಂತೆ ಶ್ರೀ ಪ್ರಕಾಶ ಭಟ್ ಅವರು ನಡೆಸಿಕೊಡಲಿದ್ದಾರೆ. ಉಪಾಹಾರ ವ್ಯವಸ್ಥೆ ಇದೆ. ಎಲ್ಲ ಸಮಾಜ ಬಂಧುಗಳು ಹಾಜರಿದ್ದು ನಮ್ಮ ಆಚರಣೆಗಳನ್ನು ಜ್ವಲಂತವಾಗಿಡೋಣ.
ತರಬೇಕಾದ ಸಾಹಿತ್ಯ:
1. ಪಂಚಪಾತ್ರೆ,ಉದ್ಧರಣೆ
2. ಹರಿವಾಣ, ತಂಬಿಗೆ
3. ಚಾಪೆ, ಚಿಲ್ಲರೆ
ಸ್ಥಳ: ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಚಂದ್ರ ಬಡಾವಣೆ ನಾಗರಬಾವಿ ವೃತ್ತದಿಂದ ನಾಯಂಡಹಳ್ಳಿ ಕಡೆಗೆ ಸಾಗುವ ಸರ್ವೀಸ್ ರಸ್ತೆ ಯಲ್ಲಿ ಸ್ವಲ್ಪ ದೂರ ಕ್ರಮಿಸಿ ಬಲತಿರುವು.
ಆಸಕ್ತರೆಲ್ಲ 30ನೇ ತಾರೀಕಿನೊಳಗೆ ನೋಂದಾಯಿಸಿಕೊಳ್ಳಬೇಕು.
Rigveda Upakarma day, We ritually change our Yajnopaveetha along with Shrauta rituals. Upakarma which is a Vedic ritual is practiced by us.
30-April-2022
23rd Annual Generally Body Meeting to discus the activities of prior year and Elect New Management Committee to take the responsibility of Bangalore Karada Brahmana Samaja.
To Re-visit the Bylaws and frame new Rules and regulations for the Samaja with the Approval of Karada Brahmana Samaja Members
01-May-2022
ದಿನಾಂಕ 1/5/ 2022ರ ರವಿವಾರದಂದು ಬೆಳಗ್ಗೆ 7ಕ್ಕೆ ವಿಘ್ನ ನಿವಾರಕನ ಪೂಜೆ "ಗಣಹೋಮ"ದೊಂದಿಗೆ ಶುಭಾರಂಭಗೊಂಡ ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು ಇದರ ವಾರ್ಷಿಕೋತ್ಸವವು ನೂರಕ್ಕೂ ಹೆಚ್ಚು ಬಂಧುಗಳ ಆಗಮನದಿಂದ ನಮ್ಮ ಒಗ್ಗಟ್ಟನ್ನು ಸಾಬೀತುಪಡಿಸಿತು.
ಬೆಳಿಗ್ಗೆ 10.30ಕ್ಕೆ ಮುಖ್ಯ ಅತಿಥಿಗಳಾದ ಶ್ರೀಮತಿ ಆರತಿ ವಿಬಿ ಹಾಗೂ ಶ್ರೀ ಸೂರ್ಯನಾರಾಯಣ ಭಟ್,ಕಶಕೋಡಿ ಅವರನ್ನು ಪ್ರೀತಿಯಿಂದ ವೇದಿಕೆಗೆ ಕರೆತರಲಾಯಿತು. ಶ್ರೀಮತಿ ದೀಪಶ್ರೀ ಕಂಯಂಪಾಡಿ ಅವರ ಮಧುರ ದನಿಯ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭೆಗೆ ಶ್ರೀ ಜಯರಾಮ್ ಕೊಮ್ಮುಂಜೆ ಅವರು ಅತಿಥಿಗಳನ್ನು ಆದರಪೂರ್ವಕ ಸ್ವಾಗತಿಸಿದರು. ಅತಿಥಿಗಳು ಹಾಗೂ ಸಮಿತಿಯ ಪದಾಧಿಕಾರಿಗಳು " ತಮಸೋಮ ಜ್ಯೋತಿರ್ಗಮಯ" ಎಂದು ದೀಪ ಬೆಳಗಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.
ಭೋಗ ಹಾಗೂ ತ್ಯಾಗದ ಬಗೆಗಿನ ಭವ್ಯ ವಿವರಣೆ ನೀಡಿದ ಡಾ. ಆರತಿ ವಿ.ಬಿ ಅವರು ತಮ್ಮ ಸರಳ ಸುಂದರ ನುಡಿಗಳಲ್ಲಿ ಬ್ರಾಹ್ಮಣ ಅನುಷ್ಠಾನಗಳನ್ನು ನಾವು ಅರಿತು ಮುಂದೆ ಕೊಂಡೊಯ್ಯುವ ಅಗತ್ಯತೆ, ಮನೆ-ಮನೆಗಳಲ್ಲಿ ಭಾರತೀಯತೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ಹೊತ್ತು ಮುನ್ನಡೆಯಲು ಪ್ರೀತಿಯಿಂದ, ಅರ್ಥಪೂರ್ಣವಾಗಿ ಮಾತನಾಡಿದರು. ನಮ್ಮತನವನ್ನು ಮರೆಯದಂತೆ ತಿಳಿಹೇಳಿದರು.
ಮುಂದೆ, ಸನ್ಮಾನಿತರಾದ ನಮ್ಮ ಸಮಾಜದ ಹೆಮ್ಮೆ ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ ಅವರು ಜಾತಿ ಸಂಘಟನೆಗಳು ಸಮಾಜಕ್ಕೆ ಮಾರಕ, ಈ ಸಮಸ್ಯೆಯ ನಿವಾರಣೆ ಬಹಳ ಕಷ್ಟ ಎಂದರು.ಎಲ್ಲರೂ ನಮ್ಮ ಸಂಸ್ಕೃತಿಯಿಂದ ವಿಮುಖರಾಗುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣರು ಬ್ರಾಹ್ಮಣ್ಯವನ್ನು ಗೌರವಿಸಿ ಮೂಲವೃತ್ತಿಯಾದ ವೈದಿಕ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದನ್ನು ಬಹಳ ಹೆಮ್ಮೆಯಿಂದ ಹೇಳಿಕೊಂಡರು. ತಾವು ಮಾಡಿದ ಸಾವಿರಾರು ಸಮಾಜ ಸೇವಾ ಕೈಂಕರ್ಯಗಳಲ್ಲಿ ಕೆಲವನ್ನು ನಮ್ಮೊಂದಿಗೆ ಹಂಚಿಕೊಂಡು ಅವರಂತಾಗಲು ಪ್ರಯತ್ನಿಸಲು ನಮ್ಮ ಮನಸ್ಸುಗಳ ಒಳಗೊಂದು ಮಾದರಿಯ ಕಿಡಿ ಹಚ್ಚಿದರು.
ಮುಂದೆ, ಶ್ರೀ ಮಂಜುನಾಥ ಮುಂಡಕಾನ ಅವರು ಪ್ರತಿವರ್ಷದಂತೆ ವಿದ್ಯಾರ್ಥಿ ಸಹಾಯಕ ನಿಧಿಯನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಿದರು.
ಶ್ರೀ ಶೇಷಕೃಷ್ಣ ಭಟ್ ಅವರು "ಕರಾಡ ಕಲಾನಿಧಿ" ಎಂಬ ಯೂಟ್ಯೂಬ್ ವಾಹಿನಿಯ ಬಗ್ಗೆ ಮಾತನಾಡಿ ಬೆಂಬಲಿಸುವಂತೆ ಕೇಳಿಕೊಂಡರು.
ಶ್ರೀ ಬಾಲಮುರಳಿ ಕೊಮ್ಮುಂಜೆ ಅವರು ಬಾಯಾರು ಸುತ್ತಮುತ್ತಲು ಸಕ್ರಿಯವಾಗಿರುವ "ಯುವ ಕರಾಡ" ಬಗ್ಗೆ ವಿವರಿಸಿ ಇನ್ನೂ ಇಂತಹ ಒಕ್ಕೂಟಗಳು ನಮ್ಮ ಸಮಾಜದ ಯುವಕರನ್ನು ಒಗ್ಗೂಡಿಸಿ ಉತ್ತಮ ಕೆಲಸಗಳಿಗೆ ನಾಂದಿಯಾಗಲಿ ಎಂದು ಹಾರೈಸಿದರು.
ಅಧ್ಯಕ್ಷರಾದ ಶ್ರೀ ಅಶೋಕ ಮುಂಡಕಾನ ತಮ್ಮ ಭಾಷಣದಲ್ಲಿ ಸಮಯದ ಪರಿಪಾಲನೆಯು ಕೂಡ ಅತ್ಯಂತ ಅಗತ್ಯ ಎಂದು ಎಚ್ಚರಿಸಿದರು.
ಊರ ಭೋಜನವನ್ನೇ ನೆನಪಿಸುವ ಪುಷ್ಕಳ ಊಟ ಬಹಳಷ್ಟು ಜನರ ಪ್ರಶಂಸೆಗೆ ಪಾತ್ರವಾಯಿತು. ಊಟದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದ ಶ್ರೀ ಸೂರ್ಯನಾರಾಯಣ ಭಟ್, ಕೆಮ್ಮಣಬಳ್ಳಿ ಅವರು ನಿಜಕ್ಕೂ ಅಭಿನಂದನಾರ್ಹರು.
ಶ್ರೀಮತಿ ಶಕುಂತಲಾ ಜಯರಾಮ್ ಹಾಗೂ ಶ್ರೀಮತಿ ಮಹಿತಾ ಭಟ್ ಅವರ ನಿರೂಪಣೆಯಲ್ಲಿ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ಪೂರ್ಣಗೊಂಡಿತು.
ಸಾಂಸ್ಕೃತಿಕ ಕಾರ್ಯಕ್ರಮವು ಸಂಜೆ 3 ಗಂಟೆಗೆ ಪ್ರಾರಂಭವಾಯಿತು. ಮುಖ್ಯ ಆಕರ್ಷಣೆ ಶ್ರೀ ಶಿವಾನಂದ ಹಾಗೂ ತಂಡ. ಅವರಿಗೆ ನಾವೇನು ಕಮ್ಮಿ ಇಲ್ಲ ಎಂದು ನಮ್ಮ ಸಮಾಜದ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ವೇದಿಕೆಯೇರಿ ಹಾಡು ನೃತ್ಯಗಳಿಂದ ನಮ್ಮನ್ನು ರಂಜಿಸಿದರು. ಸುಮಾರು 20ಕ್ಕೂ ಹೆಚ್ಚು ಕಲಾವಿದರು ತಮ್ಮ ಪ್ರತಿಭೆಯ ಪರಿಚಯ ಮಾಡಿಕೊಟ್ಟರು. ಮಂಗಳೂರಿನಿಂದ ಆಗಮಿಸಿದ ನೃತ್ಯಕಲಾವಿದೆ ಕುಮಾರಿ ಮಹತಿ ಕರ್ಪೆ, ಹಾಡಿನ ಮೋಡಿ ಮಾಡಿದ ಶ್ರೀಮತಿ ದೀಪಶ್ರೀ ಕಯಂಪಾಡಿದ ಅವರನ್ನು ಶಾಲು, ಫಲ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಸುಮಾರು ಎರಡು ವರ್ಷಗಳ ನಂತರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಜೆ 6.30 ರವರೆಗೆ ನಡೆದು ನಿರ್ವಿಘ್ನವಾಗಿ ಸಂಪನ್ನಗೊಂಡಿತು.